ವಿಷಯಕ್ಕೆ ಹೋಗಿ

ನಾನು ಒಬ್ಬ ಸೆಕ್ಯುಲರ್. ಸೆಕ್ಯುಲರ್ ಎಂದರೆ ಗೊತ್ತಲ್ಲ? ಎಲ್ಲ ಧರ್ಮ ಜಾತಿ ಕುಲ ವರ್ಗಗಳನ್ನೂ ಸಮಾನವಾಗಿ ಕಾಣುವಾತ


              ನಾನು ಇನ್ನು ಮುಂದೆ ತರಕಾರಿ ಕೊಳ್ಳುವುದು ಯಾರು ತರಕಾರಿಗೆ ತಮ್ಮ ಎಂಜಲು, ಸಿಂಬಳ, ಉಚ್ಚೆ, ಬೆವರು ಇತ್ಯಾದಿಗಳನ್ನು ಅಂಟಿಸುವ ಸಾಧ್ಯತೆ ಇಲ್ಲ ಎಂದು ನನಗೆ ಅನ್ನಿಸುತ್ತದೋ ಅಂಥವರಿಂದ ಮಾತ್ರ. ತರಕಾರಿ, ಹಣ್ಣುಗಳಿಗೆ ಮೇಲೆ ಹೇಳಿದ ಅಸಹ್ಯಗಳನ್ನು ಹಚ್ಚಿ ಮಾರುವವರು ಎಂದು ಯಾರ ಮೇಲೆ ನನಗೆ ಅನುಮಾನ ಬರಬಹುದೋ ಅಂಥವರಿಂದ ನಾನು ಏನನ್ನೂ ಖರೀದಿಸುವುದಿಲ್ಲ. ಇದರಲ್ಲಿ ಧರ್ಮದ ಪ್ರಶ್ನೆ ಇಲ್ಲ.

ನಾನು ನನ್ನ ಮನೆಯನ್ನು ಬಾಡಿಗೆ ಕೊಡುವುದು ಯಾರು ಬಾಡಿಗೆ ಮನೆಯೊಳಗೆ ಸ್ವಚ್ಛತೆ, ಶುದ್ಧತೆಗಳನ್ನು ಕಾಪಾಡಿಕೊಳ್ಳುತ್ತಾರೋ ಅವರಿಗೆ ಮಾತ್ರ. ಯಾರು ಈ ದೇಶದ ಪ್ರಜೆಗಳು ಎಂಬ ಪ್ರಜ್ಞೆ ಇಟ್ಟುಕೊಂಡು ಬದುಕುತ್ತಾರೋ ಅವರಿಗೆ ಮಾತ್ರ. ಯಾರು ಈ ದೇಶದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಯಿದೆ ಎನ್ನುತ್ತಾರೋ ಅವರಿಗೆ ಮಾತ್ರ. ಯಾರು ಬಾಂಬು ಮಾಡುವವರಲ್ಲ ಎಂಬ ನಂಬಿಕೆ ನನಗೆ ಬರುತ್ತದೋ ಅವರಿಗೆ ಮಾತ್ರ. ಯಾರು ಭಯೋತ್ಪಾದಕರಂತೆ ಕಾಣುವುದಿಲ್ಲವೋ ಅವರಿಗೆ ಮಾತ್ರ. ಒಂದು ಹಾಸ್ಟೆಲ್ಲಿಗಾಗುವಷ್ಟು ಜನರನ್ನು ಹಾಕಿಕೊಂಡು ಮನಸ್ಸು ಬಂದಂತೆ ಬದುಕುವ ಜನರಿಗೆ ನನ್ನ ಮನೆಯಲ್ಲಿ ಬಾಡಿಗೆ ಹಿಡಿಯಲು ಅವಕಾಶವಿಲ್ಲ. ಯಾರು ಈ ದೇಶದ ಪ್ರಜೆಗಳೆಂಬ ಭಾವನೆಯಲ್ಲಿ ಬದುಕುತ್ತಿಲ್ಲವೋ, ಯಾರಿಗೆ ಈ ದೇಶದ ಬಗ್ಗೆ ಅಭಿಮಾನ, ಹೆಮ್ಮೆ, ಪ್ರೀತಿಗಳಿಲ್ಲವೋ ಅಂಥವರಿಗೆ ಬಾಡಿಗೆ ಕೊಡದೆ ಇರುವ ಹಕ್ಕನ್ನು ನಾನು ಉಳಿಸಿಕೊಂಡಿದ್ದೇನೆ. ಇದರಲ್ಲಿ ಧರ್ಮದ ಪ್ರಶ್ನೆ ಇಲ್ಲ.

ಪ್ಲಂಬಿಂಗ್ ಕೆಲಸ, ಎಲೆಕ್ಟ್ರಿಕ್ ಕೆಲಸ, ಮೇಸ್ತ್ರಿ ಕೆಲಸ, ಗಾಡಿಯ ಸರ್ವಿಸ್ ಮಾಡಿಸುವುದು, ಪಂಚರ್ ಹಾಕಿಸುವುದು.... ಹೀಗೆ ಕೆಲಸ ಏನೇ ಇರಲಿ, ನಾನು ಅವನ್ನು ಮಾಡಿಸುವುದು ನನ್ನ ದೇಶದ ಬಗ್ಗೆ ಅಭಿಮಾನ ಇರುವವರ ಬಳಿ ಮಾತ್ರ. ಎಲೆಕ್ಟ್ರಾನಿಕ್ ವಸ್ತುಗಳು, ದಿನಸಿ ಸಾಮಾನು, ಲೆದರ್ ಸರಕು, ಬಟ್ಟೆ ಬರೆ, ಚಪ್ಪಲಿ... ಇವೆಲ್ಲ ನಾನು ಕೊಳ್ಳುವುದು ಯಾರಿಂದ ಈ ದೇಶದ ಅರ್ಥವ್ಯವಸ್ಥೆ ಉತ್ತಮವಾಗುತ್ತದೆ ಎಂದು ನನಗನ್ನಿಸುತ್ತದೋ ಅಂಥವರಿಂದ ಮಾತ್ರ. ಯಾರು ಈ ದೇಶದ ಎಕಾನಮಿಗೆ ತಮ್ಮ ಪಾಲಿನ ಕಿಂಚಿತ್ ಕೊಡುಗೆಯನ್ನಾದರೂ ಕೊಡುತ್ತಿದ್ದಾರೆಂದು ನಾನು ಭಾವಿಸುತ್ತೇನೋ ಅವರಲ್ಲಷ್ಟೇ ನನ್ನ ವ್ಯಾಪಾರ. ದೇಶದ ಕಾನೂನಿಗೆ ಬೆಲೆ ಕೊಡದ, ದೇಶದ ಎಕಾನಮಿ ಬರ್ಬಾದ್ ಮಾಡಬೇಕೆಂದು ಬಯಸುವ ಯಾವ ವ್ಯಕ್ತಿಯೊಂದಿಗೂ ನನ್ನ ಒಂದು ರುಪಾಯಿಯ ವ್ಯವಹಾರವೂ ಇಲ್ಲ. ಇದರಲ್ಲಿ ಧರ್ಮದ ಪ್ರಶ್ನೆ ಇಲ್ಲ.

ನನ್ನ ಮಕ್ಕಳು ಎಂಥವರ ಜೊತೆ ಒಡನಾಡಬೇಕೆಂದು ನಿರ್ಧರಿಸುವವನು ನಾನೇ. ದೇಶದ ಇತಿಹಾಸ, ಭೂಗೋಳ, ಪೌರನೀತಿಗಳ ಬಗ್ಗೆ ಪ್ರಾಥಮಿಕ ಮಾಹಿತಿಯಾದರೂ ಇರುವವರ ಜೊತೆ ಮಾತ್ರ ನನ್ನ, ನನ್ನ ಮಕ್ಕಳ ಒಡನಾಟ. ಆರೋಗ್ಯದ ಬಗ್ಗೆ ಪ್ರಾಥಮಿಕ ಹಂತದ್ದಾದರೂ ತಿಳಿವಳಿಕೆ ಮತ್ತು ಕಾಳಜಿ ಇರುವವರ ಜೊತೆ ಮಾತ್ರ ನನ್ನ, ನನ್ನ ಮಕ್ಕಳ ವ್ಯವಹಾರ. ತನಗೆ ರೋಗ ಬರಿಸಿಕೊಂಡು ಮಿಕ್ಕವರಿಗೂ ಹಂಚುತ್ತೇನೆ ಎಂಬ ಮನಸ್ಥಿತಿ ಇರುವ ಯಾವ ಸಮುದಾಯದ ವ್ಯಕ್ತಿಗಳ ಜೊತೆಗೂ ನನ್ನ ಮತ್ತು ನನ್ನ ಮನೆಮಂದಿಯ ಯಾವ ವ್ಯವಹಾರವೂ ಇಲ್ಲ. ಯಾಕೆಂದರೆ ನಮಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಮೊದಲ ಆದ್ಯತೆ. ಇದರಲ್ಲಿ ಧರ್ಮದ ಪ್ರಶ್ನೆ ಇಲ್ಲ. 

ನನ್ನ ಸ್ನೇಹಿತರು ಯಾರಾಗಿರಬೇಕು ಎಂಬುದನ್ನು ನಿರ್ಧರಿಸುವ ಸಂಪೂರ್ಣ ಹಕ್ಕು ನನ್ನದೇ. ನಾಗರಿಕ ಕಾನೂನುಗಳಿಗೆ ಬೆಲೆ ಕೊಡುವ ವ್ಯಕ್ತಿಗಳ ಜೊತೆಗಷ್ಟೇ ನನಗೆ ಸ್ನೇಹ ಸಾಧ್ಯ. ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಿಸುವ, ರಸ್ತೆ ನಿಯಮಗಳನ್ನು ಮನಬಂದಂತೆ ಮುರಿಯುವ ವ್ಯಕ್ತಿಗಳಿಗೆ ನಾನು ಗೌರವ ಕೊಡಲಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳ ಬಗ್ಗೆ ಗೌರವವಿಲ್ಲದ ವ್ಯಕ್ತಿಗಳ ಬಗ್ಗೆ ನನಗೂ ಗೌರವ ಇಲ್ಲ. ಪೊಲೀಸರು ಮತ್ತು ವೈದ್ಯರ ಮೇಲೆ ದೈಹಿಕ ಹಲ್ಲೆ ಮಾಡುವ, ಕಾನೂನನ್ನು ಕೈಗೆತ್ತಿಕೊಳ್ಳುವ, ಎಲ್ಲ ಕಾನೂನಿಗೂ ಅತೀತರಂತೆ ವರ್ತಿಸುವ ಗೂಂಡಾ ಪ್ರವೃತ್ತಿಯ ವ್ಯಕ್ತಿಗಳ ಜೊತೆ ನನ್ನ ಸ್ನೇಹ ಸುತಾರಾಂ ಸಾಧ್ಯವಿಲ್ಲ. ಹಾಗಾಗಿ ಯಾರು ಸಭ್ಯರೋ, ನಾಗರಿಕರೋ, ಮನುಷ್ಯರಂತೆ ವರ್ತಿಸುವವರೋ ಅವರನ್ನಷ್ಟೇ ನಾನು ಸ್ನೇಹಕ್ಕೆ ಅರ್ಹರು ಎಂದು ಪರಿಗಣಿಸುತ್ತೇನೆ. ಇದರಲ್ಲಿ ಧರ್ಮದ ಪ್ರಶ್ನೆ ಇಲ್ಲ.

ನನ್ನ ಹಾಗೆಯೇ ನೀವೂ ಸೆಕ್ಯುಲರ್ ಆಗಿ.

-ರೋಹಿತ್ ಚಕ್ರತೀರ್ಥ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗಡಿಯಲ್ಲಿ ಚೀನಾದ ಕೋತಿಗಳ (ಮಿಲಿಟರಿ) ಕಪಿಚೇಷ್ಟೆಯ ವಿಡಿಯೋ ವೈರಲ್

ಕಾಂಗ್ರೆಸ್ಸಿಗರೇ... ಪಾಕಿಸ್ತಾನದ ಬಾಯಿಮುಚ್ಚಿಸುವ ತಾಕತ್ತು ಇದಿಯಾ ? ( ಸೋನಿಯಾ ವಿವಾದ)

ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರದಿಂದ ಧನ ಸಹಾಯಕ್ಕೆ ಕೂಡಲೇ ಈ ಆಧಾರಗಳನ್ನು ತಯಾರು ಮಾಡಿ

  ಸಾಧ್ಯದಲ್ಲೇ ಸೇವಾ ಸಿಂಧೂ ವೆಬ್‌ ಸೈಟ್‌ ಪ್ರಾರಂಭವಾಗಲಿದೆ, ಚಾಲಕರು ಕೂಡಲೇ  ಈ ಮೇಲಿನ ಎಲ್ಲಾ  ಆಧಾರಗಳನ್ನು ಹೊಂದಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿದೆ.